ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಸಿಬ್ಬಂದಿ ಸ್ಪಂದನ ಕಾರ್ಯಕ್ರಮ

John Prem
0 0
Read Time:1 Minute, 54 Second

ದಿನಾಂಕ 15-11-2022 ರಂದು ಶಿರಸಿ ಉಪ ವಿಭಾಗ, ವ್ರತ್ತ ಕಚೇರಿ, ನಗರ ಠಾಣೆಗೆ ಭೇಟಿ ನೀಡಿ ಶಿರಸಿ ಉಪ ವಿಭಾಗದ ಎಲ್ಲ ಏಳು ಪೊಲೀಸ್ ಠಾಣೆಗಳ ಅಧಿಕಾರಿಗಳ ಸಭೆ ನಡೆಸಿ ಆಯಾ ಠಾಣಾ ವ್ಯಾಪ್ತಿಯ ಸಮಗ್ರ ಮಾಹಿತಿ ಪಡೆದು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಲಾಯಿತು.

ನಂತರ ” *ಸಿಬ್ಬಂದಿ* *ಸ್ಪಂದನ*” ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಶಿರಸಿ ಉಪ ವಿಭಾಗದ 7 ಪೊಲೀಸ ಠಾಣೆಗಳ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಜಿಲ್ಲಾ ಪೊಲೀಸ್ ಘಟಕದ AAO ( ಸಹಾಯಕ ಆಡಳಿತಾಧಿಕಾರಿ ) ಹಾಗೂ ಲಿಪಿಕ್ ಸಿಬ್ಬಂದಿಯವರ ಸಮಕ್ಷಮದಲ್ಲಿ ಕುಂದುಕೊರತೆಗಳನ್ನ ಆಲಿಸಿ, ಸಿಬ್ಬಂದಿಗಳ ಕುಂದುಕೊರತೆಗಳಿಗೆ ನಿಯಮಾನುಸಾರ, ವಿಳಂಬವಿಲ್ಲದೆ ಶೀಘ್ರವಾಗಿ ಪರಿಹರಿಸುವಂತೆ AAO ರವರಿಗೆ ( ಸಹಾಯಕ ಆಡಳಿತಾಧಿಕಾರಿ ) ಸೂಚಿಸಲಾಯಿತು.ಹಾಗೂ ಈ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿರುವ ಶಿರಸಿ ಉಪ ವಿಭಾಗದ 7 ಪೊಲೀಸ್ ಠಾಣೆಗಳ 7 ಜನ ಪೊಲೀಸ್ ಸಿಬ್ಬಂದಿಗಳಾದ

(1) ಪ್ರವೀಣ .ಎನ್. ಶಿರಸಿ ನಗರ ಠಾಣೆ

(2) ಗಣಪತಿ ಭಂಟ ಶಿರಸಿ ಹೊಸ ಮಾರುಕಟ್ಟೆ ಠಾಣೆ

(3) ಮಹಾದೇವ ನಾಯ್ಕ ಶಿರಸಿ ಗ್ರಾಮೀಣ ಠಾಣೆ

(4) ಅಣ್ಣಪ್ಪ ಬುಡಿಗೇರ ಮುಂಡಗೋಡ ಠಾಣೆ

(5) ಬಸವರಾಜ ಹಗರಿ ಯಲ್ಲಾಪುರ ಠಾಣೆ

(6) ಮಂಜುನಾಥ ನಡುವಿನಮನಿ ಬನವಾಸಿ ಠಾಣೆ

(7) ಮೊಹಮದ್ ಗೌಸ್ ಅಹಮದ್ ಸಾಬ ಸಿದ್ದಾಪುರ ಪೊಲೀಸ್ ಠಾಣೆರವರುಗಳಿಗೆ Cop of the month (ತಿಂಗಳ ಅತ್ಯುತ್ತಮ ಸಾಧಕ)ಅಂತಾ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಗಡಿ ಅಪರಾಧ ಸಭೆ

ದಿನಾಂಕ – 13-12-2022 ರಂದು ಹಾವೇರಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ “ಗಡಿ ಅಪರಾಧ ಸಭೆ” ಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್ ಐಪಿಎಸ್ ರವರು ಹಾಗೂ ಹಾವೇರಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಹನುಮಂತರಾಯ ರವರು ಭಾಗವಹಿಸಿದ್ದರು. ಸದರಿ ಸಭೆಯಲ್ಲಿ ಧಾರವಾಡ, ಕಾರವಾರ, ದಾವಣೆಗೆರೆ, ಬಳ್ಳಾರಿ, ಹಾಗೂ ಗದಗ ಜಿಲ್ಲೆಗಳಿಂದ ಪೊಲೀಸ್‌ ಅಧಿಕಾರಿ ಹಾಗೂ ಅಪರಾಧ ದಳದ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಅವರೊಂದಿಗೆ ವಿವಿಧ ಪತ್ತೆಯಾಗದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಉಪಯುಕ್ತ […]

Get News on Whatsapp

by send "Subscribe" to 7200024452
Close Bitnami banner
Bitnami