Read Time:1 Minute, 14 Second
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಚಿಕ್ಕ ಕೊರಟಿ ಗ್ರಾಮದ ವಾಸಿ ಪಟಾಲಪ್ಪ(38) ಆರೋಪಿಯನ್ನು ವಶಕ್ಕೆ ಪಡೆದು 117 ಗ್ರಾಂ ತೂಕದ 5.85 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಸ್ಥಳೀಯ ನಂದಗುಡಿ ಪೊಲೀಸರು ಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅದೇ ಗ್ರಾಮದ ವಾಸಿ ಪಟಾಲಪ್ಪ ಹೊಂಚು ಹಾಕಿ ಮನೆಯ ಬೀಗ ತೆಗೆದು ಬಿರುವಿನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಯಾರಿಗೂ ಅನುಮಾನ ಬರದಂತೆ ಬೀಗ ಹಾಕಿ ಪರಾರಿಯಾಗಿದ್ದಾನೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೊಸಕೋಟೆ ಉಪ ವಿಭಾಗದ ಡಿವೈಎಸ್ಪಿ ಉಮಾಶಂಕರ್ ನೇತೃತ್ವದಲ್ಲಿ ನಂದಗುಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಿ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ ಸಿಬ್ಬಂದಿಗಳಾದ ಎಎಸ್ಐ ನಾರಾಯಣಸ್ವಾಮಿ. ಗಂಗಬಸಯ್ಯ. ಚೇತನ್. ಯತುಂ ಪಾಷಾ. ಮೇಘರಾಜ್. ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.