ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ನಂದಗುಡಿ ಪೋಲೀಸರ ಕಾರ್ಯಾಚರಣೆ ಇಬ್ಬರು ಬೈಕ್ ಕಳ್ಳರ ಬಂಧನ

John Prem
2 0
Read Time:2 Minute, 12 Second

ಹೊಸಕೋಟೆ ತಾಲೂಕಿನ ನಂದುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕದಿಮರನ್ನು ಬಂಧಿಸಿ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ನಂದಗುಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಇಟ್ಟಸಂದ್ರ ಗ್ರಾಮದ ವಾಸಿಗಳಾದ ಮಂಜುನಾಥ್ ಹಾಗೂ ವೆಂಕಟೇಶ್ ಆರೋಪಿಗಳು ಬೆಳಗಿನ ಜಾವ 5:00 ಗಂಟೆಯಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಹೊಸಕೋಟೆ ಚಿಂತಾಮಣಿ ರಸ್ತೆಯ ಮಲ್ಲಿ ಮಾಕನಪುರ ಬಳಿ ರಸ್ತೆಯಲ್ಲಿ ಅನುಮಾನಸ್ಪದವಾಗಿ ನಡೆದು ಬರುತ್ತಿರುವಾಗ ಸುಳ್ಳು ವಿಳಾಸ ನೀಡಿ ಸಿಕ್ಕಿ ಬಿದ್ದಿದ್ದಾರೆ.
ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶ. ಇಟ್ಟಸಂದ್ರ ಹಾಗೂ ಇಂಡಿಗನಾಳದಲ್ಲಿ ಬೈಕ್ ಕಳ್ಳತನ ಮಾಡಿರೋದಾಗಿ ವಿಚಾರಣೆ ವೇಳೆ ತಿಳಿಸಿರುತ್ತಾರೆ.

ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಮೂರು ಬೈಕ್ ಗಳನ್ನು ವಶಕ್ಕೆ ಪಡೆದು ಬಂಧಿತ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಂದುಗುಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧೀಕ್ಷಕರಿಂದ ಸಿಬ್ಬಂದಿಗೆ ಪ್ರಶಂಸೆ: ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ. ಸಿಬ್ಬಂದಿಗಳಾದ ಗಂಗಬಸಯ್ಯ. ನಾರಾಯಣಸ್ವಾಮಿ. ನಟರಾಜ್. ಮಹೇಶ್. ನಾಗರಾಜ್. ವಾಲೇಕರ್. ಪಟೇಲ್. ಕಿರಣ್ ರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೊಸಕೋಟೆ ಪೊಲೀಸ್ ಉಪ ಅಧೀಕ್ಷಕರು ಮತ್ತು ನಂದಗುಡಿ ಠಾಣೆಯ ವೃತ್ತ ನಿರೀಕ್ಷಕರು ಹೆಚ್ಎಮ್ ರಂಗಸ್ವಾಮಿ ಅಭಿನಂದಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಬಕ್ರೀದ್ ಪ್ರಯುಕ್ತ ಶಾಂತಿಯುತ ಸಭೆ|ಮೈಕೋ ಲೇಔಟ್ ಉಪವಿಭಾಗ ಪೊಲೀಸ್ |ACP Karibasavana Gowda |Police News Plus |

ಬೆಂಗಳೂರು :ಮೈಕೋ ಲೇಔಟ್ ಉಪವಿಭಾಗ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಸಭೆ ಆಯೋಜಿಸಲಾಯಿತು.ತಿಲಕ್ ನಗರ ,ಎಸ್ .ಜಿ. ಪಾಳ್ಯ ,ಬಿ.ಟಿ.ಎಂ. ಲೇಔಟ್ ಮತ್ತು ಬೊಮ್ಮನಹಳ್ಳಿ ದಿಂದ ಧಾರ್ಮಿಕ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಜುಲೈ 10 ರಂದು ಆಚರಿಸಲಿರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮವಾಗಿ ಗೋವು ಅಥವಾ ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ರಾಜ್ಯ ಸರ್ಕಾರವು ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ […]

Get News on Whatsapp

by send "Subscribe" to 7200024452
Close Bitnami banner
Bitnami