ಕಳವು ಪ್ರಕರಣದ ಆರೋಪಿ ಬಂಧನ 38 ಗ್ರಾಂ ಬಂಗಾರ ವಶ

John Prem
1 0
Read Time:2 Minute, 18 Second

ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯ ಮೊ.ಸಂ. 21/2022 ಕಲಂ 454,380 ಐ.ಪಿ.ಸಿ ಹಾಗೂ ಮೊ.ಸಂ 60/2021 ಕಲಂ 454, 4547, 380 ಐ.ಪಿ.ಸಿ ಪ್ರಕರಣಗಳಲ್ಲಿ ಕಳುವಾಗಿರುವ ಮಾಲು & ಆರೋಪಿಗಳ ಪತ್ತೆ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಧರಣೀದೇವಿ, ಐಪಿಎಸ್ ಮತ್ತು ಪೊಲಿಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ಮಾರ್ಗದರ್ಶನದಂತೆ ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರಾದ ಕುಮಾರಸ್ವಾಮಿ.ಟಿ.ಆರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ. ಶೃತಿ, ಪ್ರೋ.ಪಿ.ಎಸ್.ಐ ಶ್ರೀನಿವಾಸ್ ಪ್ರಸಾದ್. ಎಸ್.ಜಿ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ವಿಶೇಷ ತಂಡವನ್ನು ರಚಿಸಿದ್ದು, ದಿನಾಂಕ 13.06.2022 ರಂದು ರಾತ್ರಿ 08.00 ಗಂಟೆಯಲ್ಲಿ ಆರೋಪಿಯಾದ ಶಾಂತ ಕುಮಾರ್ ಬಿನ್ ಪ್ರಭು, ವಯಸ್ಸು ೩೩ ವರ್ಷ, ವಾಸ: ಲೂರ್ದನಗರ, ಆಂಡ್ರಸನ್ಪೇಟೆ, ಕೆ.ಜಿ.ಎಫ್, ಹಾಲಿ ವಾಸ-ಪಂಡಾರಂ ಲೈನ್, ಮಾರಿಕುಪ್ಪಂ, ಕೆ.ಜಿ.ಎಫ್ ಎಂಬಾತನನ್ನು ವಿಶೇಷ ತಂಡದವರು ಪತ್ತೆ ಮಾಡಿ, ಆರೋಪಿ ಕಡೆಯಿಂದ 1) 16 ಗ್ರಾಂ ಬ್ರಾಸ್ ಲೈಟ್, 2) 15 ಗ್ರಾಂ ತೂಕದ ಬಂಗಾರದ ನೆಕ್ಲೇಸ್, 3) 2.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ, 4) 5.5 ಗ್ರಾಂ ತೂಕದ ಒಂದು ಜೊತೆ ಬಂಗಾರದ ಓಲೆ ಜುಮುಕಿ, ಒಟ್ಟು 38 ಗ್ರಾಂ ತೂಕದ ಬಂಗಾರವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

ವಿಶೇಷ ತಂಡದ ಅಧಿಕಾರಿ & ಸಿಬ್ಬಂದಿಯವರ ವಿವರ

1) ಶ್ರೀಮತಿ ಶೃತಿ, ಪಿ.ಎಸ್.ಐ,

2) ಶ್ರೀ.ಶ್ರೀನಿವಾಸ್ ಪ್ರಸಾದ್. ಎಸ್.ಜಿ(ಪ್ರೋ.ಪಿ.ಎಸ್.ಐ)

3) ಶ್ರೀ.ಮಹೇಂದ್ರ ಕುಮಾರ್ ಪಿಸಿ-33

4) ಶ್ರೀ. ಚೇತನ್ ಪಿಸಿ-83

5) ಶ್ರೀ. ಮುರಳಿ ಪಿಸಿ-166,

6) ಶ್ರೀ. ರಘು ಪಿಸಿ-15,

7) ಶ್ರೀ.ಜೆ. ಸತ್ಯ ಪ್ರಕಾಶ್. ಎ.ಹೆಚ್.ಸಿ-74

8) ಶ್ರೀ.ಮನೋಹರ್. ಎ.ಹೆಚ್.ಸಿ-07

9) ಶ್ರೀ.ಮಂಜುನಾಥ. ಸಿ.ಪಿ.ಸಿ-42

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಚಿಕ್ಕಬಳ್ಳಾಪುರ ಪೊಲೀಸ್ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ

ಜಿಲ್ಲೆಯಲ್ಲಿ ಸಮುದಾಯ ಪೊಲೀಸ್ ಮತ್ತು ವಿದ್ಯಾರ್ಥಿಗಳು ಎಂಬ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಎಲ್ಲಾ ಠಾಣಾ ವ್ಯಾಪ್ತಿಗಳ ಪ್ರೌಢಶಾಲೆಗಳಲ್ಲಿ ದಿ:17.06.2022 ರಿಂದ ಎರಡನೇ ಹಂತವನ್ನು ಒಟ್ಟು 53 ಪ್ರೌಢಶಾಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಐದು ವಾರಗಳ ಕಾಲ ನಡೆಯಲಿದೆ. ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ನವ ನಾಗರಿಕ ಸಮಾಜದ ಸುಧಾರಣೆಗಾಗಿ ನಾಯಕತ್ವ, ನಾಗರಿಕ ಜ್ಞಾನ, ಕಾನೂನು,ಸ್ವಯಂ ಶಿಸ್ತು, ನೈತಿಕತೆ,ಮೌಲ್ಯಗಳು ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಪ್ರತಿರೋಧ ದಂತಹ ಸಕಾರಾತ್ಮಕ ಆಲೋಚನೆಗಳು ದಾರಿತೋರಿಸುವ […]

Get News on Whatsapp

by send "Subscribe" to 7200024452
Close Bitnami banner
Bitnami