ಕೊಲೆ ಪ್ರಕರಣ ಭೇದಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು

John Prem
0 0
Read Time:2 Minute, 45 Second

ದಿನಾಂಕ 04-06-2022 ರಂದು 17-30 ಗಂಟೆಗೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪ್ಪಾಡಿ ಎಂಬಲ್ಲಿ ಚರಣ್ ರಾಜ್ ಎಂಬವರನ್ನು ಕಿಶೋರ್ ಪುಜಾರಿ ಮತ್ತು ಇತರರ ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು ಈ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2022 ಕಲಂ 302 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು.

ಇದೊಂದು ಪೂರ್ವದ್ವೇಷದಿಂದ ಮಾಡಿರುವ ಕೊಲೆಯಾಗಿರುತ್ತದೆ. ಈ ಹಿಂದೆ ಮೃತ ಚರಣ್ ರಾಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮಾರ್ಲ ಎಂಬವರನ್ನು ಕೊಲೆ ಮಾಡಿದ್ದು ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡು ಪೆರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿತರುಗಳು ಹೊಂಚುಹಾಕಿ ಕೊಲೆ ಮಾಡಿರುವುದಾಗಿದೆ.

ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಆರೋಪಿತರುಗಳಾದ 1) ಕಿಶೋರ್ ಪುಜಾರಿ ( 34), 2) ರಾಕೇಶ್ ಮಡಿವಾಳ (27), 3) ರೇಮಂತ್ ಗೌಡ (26), 4) ನರ್ಮೆಶ್ ರೈ(29), 5) ನಿತಿಲ್ ಶೆಟ್ಟಿ (23), 6) ವಿಜೇಶ್(22) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಕ್ರತ್ಯಕ್ಕೆ ಉಪಯೋಗಿಸಿದ ಬಾಳುಕತ್ತಿ-1 , ರಾಡ್ -2 ಮತ್ತು ಮೋಟಾರ್ ಸೈಕಲ್ -2 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

ಸದ್ರಿ ಪ್ರಕರಣದ ಪತ್ತೆ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ .ಋಷಿಕೇಶ್ ಭಗವಾನ್ ಸೊನವಣೆ ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಕುಮಾರ್ ಚಂದ್ರ ಹಾಗು ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಗಾನಾ.ಪಿ.ಕುಮಾರ್ ರವರ ಮಾರ್ಗದರ್ಶನದಂತೆ ಶ್ರೀ. ನವೀನ್ ಚಂದ್ರ ಜೋಗಿ, ಪೊಲೀಸ್ ವೃತ್ತ ನಿರೀಕ್ಷಕರು, ಮತ್ತು ಸಿಬ್ಬಂದಿಗಳು, ಶ್ರೀ. ರುಕ್ಮ ನಾಯ್ಕ್ ಪಿ ಎಸ್ ಐ ಬೆಳ್ಳಾರೆ ಮತ್ತು ಸಿಬ್ಬಂದಿಗಳು, ಶ್ರೀ. ದಿಲೀಪ್ ಪೊಲೀಸ್ ಉಪನಿರೀಕ್ಷಕರು ಸುಳ್ಯ ಠಾಣೆ, ಮತ್ತು ಸಿಬ್ಬಂದಿಗಳು, ಶ್ರೀ .ಉದಯರವಿ ಪಿ ಎಸ್ ಐ ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳು, ಶ್ರೀ .ರಾಜೇಶ್ ಪುತ್ತೂರು ನಗರ ಠಾಣೆ ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಬೆಳಗಾವಿ ಜಿಲ್ಲಾ ಪೊಲೀಸರನ್ನು ಯಶಸ್ವಿ ಕಾರ್ಯಾಚರಣೆ ಆರೋಪಿ ಬಂಧನ

ಬೆಳಗಾವಿ: ಲಕ್ಷ್ಮಣ ನಿಂಬರ್ಗಿ ಎಸ್ ಪಿ  ಬೆಳಗಾವಿ ಹಾಗೂ ಮಹಾನಂದ ನಂದಗಾವಿ ಹೆಚ್ಚುವರಿ ಎಸ್ ಪಿ  ಬೆಳಗಾವಿ ಹಾಗೂ ಶ್ರೀ ಬಸವರಾಜ ಎಲಿಗಾರ ಡಿ ಎಸ್ ಪಿ  ಚಿಕ್ಕೋಡಿ ಇವರು ನೇತೃತ್ವದ ತಂಡದಲ್ಲಿ ಶ್ರೀ ಸಂಗಮೇಶ್ವರ ಶಿವಯೋಗಿ ಸಿಪಿಐ ನಿಪ್ಪಾಣಿ ವೃತ್ತ ಮತ್ತು ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ್ ಸಿಬ್ಬಂದಿ ವರ್ಗದವರಾದ ಎ ಎಸ ಐ ಎಂ ಜಿ ಮುಜಾವರ, ಹೆಡ್ ಕಾನ್ಸ್ಟೇಬಲ್ ಆರ್ ಜಿ ದಿವಟೆ, ಜಿ ಎಂ ಭೋಯಿ, ಎಂ ಬಿ ಕಲ್ಯಾಣಿ, ಪಿ ಎಂ ಗಸ್ತಿ, ವಿ […]

Get News on Whatsapp

by send "Subscribe" to 7200024452
Close Bitnami banner
Bitnami