ಕಾರವಾರ ಪೊಲೀಸರು ಯಶಸ್ವಿ ಕಾರ್ಯಾಚರಣೆ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

1 0
Read Time:2 Minute, 42 Second

ದಿನಾಂಕ: 23-04-2022 ರಂದು 15-30 ಗಂಟೆಗೆ ಕಾರವಾರ ಶಹರ ಪೊಲೀಸ್ ಠಾಣಾ ಪಿ.ಎಸ್.ಐ.ಸಂತೋಷಕುಮಾರ ಎಮ್, ರವರಿಗೆ ಕಾರವಾರ ಅಜ್ಜಿ ಹೊಟೇಲ್ ಹಿಂಬದಿಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾದಕ ವಸ್ತುವನ್ನು ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುವ ತಯಾರಿಯಲ್ಲಿರುತ್ತಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ್ ಪೆನ್ನೇಕರ ಐ.ಪಿ.ಎಸ್, ರವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್. ಬದರಿನಾಥ ರವರ ಮತ್ತು ಪೊಲೀಸ್ ಉಪಾಧೀಕ್ಷಕರಾದ ಶ್ರೀ ವೆಲಂಟೈನ್ ಡಿಸೋಜಾ ರವರ ಹಾಗೂ ಪೊಲೀಸ್ ನಿರೀಕ್ಷಕರಾದ ಶ್ರೀ ಸಿದ್ದಪ್ಪ ಎಸ್, ಬೀಳಗಿ ರವರ ಮಾರ್ಗದರ್ಶನದಂತೆ ಕಾರವಾರ ಶಹರ ಪೊಲೀಸ್ ಠಾಣಾ ಪಿ.ಎಸ್.ಐ ಸಂತೋಷಕುಮಾರ ಎಮ್, ರವರು ತಮ್ಮ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ಮಾಡಿ ಆಪಾದಿತರಾದ,

1) ರಾಜೇಶ ರಾಯಪ್ಪಾ ವಡ್ಡರ, ಪ್ರಾಯ-27 ವರ್ಷ, ಉದ್ಯೋಗ-ಗೌಂಡಿ ಕೆಲಸ ಸಾ: ಶಿರವಾಡ, ಬಂಗಾರಪ್ಪ ನಗರ, ಕಾರವಾರ.

2) ಮಣಿಕಂಠ ಬಾಬು ರಾಠೋಡ, ಪ್ರಾಯ-18 ವರ್ಷ, ಉದ್ಯೋಗ-ಕೂಲಿ ಕೆಲಸ ಸಾ.ಜಂಬಾ ಕ್ರಾಸ್, ಶಿರವಾಡ,ಕಾರವಾರ, ರವರನ್ನು ವಶಕ್ಕೆ ಪಡೆದು ಆಪಾದಿತರಿಂದ 10,000/- ರೂ ಬೆಲೆಯ 210 ಗ್ರಾಂ ಆಗುವಷ್ಟು ಗಾಂಜಾ ಮಾದಕ ವಸ್ತುವನ್ನು ಮತ್ತು ಕೃತ್ಯವನ್ನು ನಡೆಸಲು ಉಪಯೋಗಿಸಿದ ಯಮಹಾ ಸ್ಕೂಟರ್ ನಂ: ಕೆಎ-30/-8355 ನೇದನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಈ ಕುರಿತು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ 30/2022 ಕಲಂ: 8 (C)& 20 (B)(1)(A) NDPS ಎಕ್ಟ್ -1985 ನೇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ ಇರುತ್ತದೆ.ತಂಡದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳಾದ ಶ್ರೀ ಸಂತೋಷಕುಮಾರ ಎಮ್. ಪಿ.ಎಸ್.ಐ ಕಾರವಾರ ಶಹರ ಪೊಲೀಸ್ ಠಾಣೆ ಶ್ರೀ ರಾಜೇಶ ಎಚ್. ನಾಯಕ ಸಿ.ಪಿ.ಸಿ-562ಶ್ರೀ ರಾಘವೇಂದ್ರ ಎಚ್. ನಾಯಕ ಸಿ.ಪಿ.ಸಿ-445ಶ್ರೀ ನಾಮದೇವ ನಾಂದ್ರೆ ಸಿ.ಪಿ.ಸಿ-1595 ಶ್ರೀ ಮಹೇಶ ನಾಯ್ಕ ಸಿ.ಪಿ.ಸಿ-815ಶ್ರೀ ಜಟ್ಟ ಎಮ್. ನಾಯ್ಡ ಸಿ.ಎಚ್.ಸಿ-743 ರವರ ಕರ್ತವ್ಯಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾದ ನಾನು ಮೆಚ್ಚುಗೆ ವ್ಯಕ್ತಪಡಿಸಿರುತ್ತೇನೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮಹಿಳಾ ಟ್ರಾಫಿಕ್ ಪೇದೆಗೆ ಮೆಚ್ಚುಗೆ ಗಳಿಸಿದ ಸಾರ್ವಜನಿಕರು

ಬೆಂಗಳೂರು : ಶ್ರೀಮತಿ. ಟಿ.ಬಿ ಪದ್ಮಾವತಿ ಎಸ್ .ಐ ಟ್ರಾಫಿಕ್ ಮಡಿವಾಳ ಠಾಣಾ ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಾಗಿತ್ತು .ಶ್ರೀಮತಿ ಟಿಬಿ ಪದ್ಮಾವತಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ 28ವರುಷ ಸೇವೆಯಾಗಿತ್ತು .ಅದರಲ್ಲಿ 14ವರುಷ ಕ್ರೀಡೆಯಲ್ಲಿ ಸೇವೆ ಸಲ್ಲಿಸಿದರು ಅನಂತರ 14ವರುಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ .ಇವರ ಸೇವೆ ಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಪದಕ ,ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ .ಇದರಲ್ಲಿ ವಿಶೇಷ ಏನೆಂದರೆ […]

Get News on Whatsapp

by send "Subscribe" to 7200024452
Close Bitnami banner
Bitnami