ದಿನಾಂಕ; 15/02/2022 ರಂದು ಮುಂಜಾನೆ 10:30 ಗಂಟೆಗೆ ಮಾನ್ಯ ಶ್ರೀ ಡಿ.ಕಿಶೋರ್ ಬಾಬು ಐಪಿಎಸ್. ಬೀದರ ಜಿಲ್ಲೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಾ: ಗೋಪಾಲ್ ಬ್ಯಾಕೋಡ್ ರವರು ಶಕ್ತಿ ಪಡೆಯನ್ನು ಚಾಲನೆ ನೀಡಿದರು. ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಬೀದರ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಚನ್ಯ ತಡೆಗಟ್ಟಲು ಮತ್ತು ಮಹಿಳೆ ಮತ್ತು ಮಕ್ಕಳಿಗೆ ತುರ್ತು ಸ್ಪಂದಿಸಲು ಅವರ ನೆರವಿಗೆ ಶಕ್ತಿ ಪಡೆಯೊಂದನ್ನು ರಚನೆ ಮಾಡಲಾಗಿದೆ. ಇದರಲ್ಲಿ ಒಬ್ಬರು ಪಿಎಸ್‍ಐ ಮತ್ತು ಎರಡು ತಂಡದಲ್ಲಿ ಮಹಿಳಾ ಸಿಬ್ಬಂದಿಯವರನ್ನೊಳಗೊಂಡಿರುತ್ತದೆ.
ದಿನಾಂಕ:08.02.2022 ರಿಂದ ದಿ.10.02.2022 ರವರೆಗೆ ಬೆಂಗಳೂರು ನಗರದಲ್ಲಿ ನಡೆದ ರಾಜ್ಯ ಮಟ್ಟದ ಪೊಲೀಸ್ ಕ್ರೀಡಾ ಕೂಟದಲ್ಲಿ ದಾವಣಗೆರೆ ತಂಡದಲ್ಲಿ ಚಿತ್ರದುರ್ಗ ಜಿಲ್ಲೆಯ ಪರವಾಗಿ ಭಾಗವಹಿಸಿ ಕಬ್ಬಡಿಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುವ ಶ್ರೀ. ರಮೇಶ್.ಡಿ.ಜಿ, ಎಹೆಚ್ ಸಿ, ರಂಗಸ್ವಾಮಿ.ಎಸ್ ಎಪಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಚಿತ್ರದುರ್ಗ ಮತ್ತು ಮಹಮದ್ ಮುಸ್ತಾಫ್, ಸಿಪಿಸಿ ರಾಂಪುರ ಪೊಲೀಸ್ ಠಾಣೆಯ ಕ್ರೀಡಾಪಟುಗಳಿಗೆ ಹಾಗೂ ಉಸ್ತುವಾರಿ ಅಧಿಕಾರಿಯಾಗಿ ಕ್ರಿಡಾಪಟುಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿ ಗೆಲುವಿಗೆ ಕಾರಣರಾದ […]