ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ರಸ್ತೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ

John Prem 9448190523
1 0
Read Time:5 Minute, 19 Second

ದಿನಾಂಕ 19-01-2022 ರಂದು ಎಎಸ್. ಪಿ ಸಾಗರ ರವರು ಸಾಗರ ಟೌನ್ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳು ಹಾಗೂ ಅವುಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.

 ರಸ್ತೆ ನಿಯಂತ್ರಣ ನಿಯಮಗಳು

1. ಎಡ ಭಾಗದಲ್ಲಿ ಚಲಿಸಿ :-
ಮೋಟಾರು ವಾಹನ ಚಾಲಕನು ಆದಷ್ಟು ರಸ್ತೆ ಎಡಭಾಗದ ಸಮೀಪವಾಗಿ ಚಲಿಸಬೇಕು ಮತ್ತು ತಾನು ಸಾಗುತ್ತಿರುವ ದಿಕ್ಕಿನಲ್ಲೇ ಹೋಗುತ್ತಿರುವ ವಾಹನಗಳಿಗೆ ತನ್ನ ಬಲಭಾಗದಿಂದ ಹೋಗಲು ಅವಕಾಶ ಕೊಡಬೇಕು.

2. ಎಡ ಮತ್ತು ಬಲ ಭಾಗಕ್ಕೆ ತಿರುಗುವುದು :-
ಮೋಟಾರು ವಾಹನ ಚಾಲಕನು – ಎಡಕ್ಕೆ ತಿರುಗುವಾಗ ತಾನು ಯಾವ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾನೋ ಹಾಗೂ ಯಾವ ರಸ್ತೆಗೆ ಪ್ರವೇಶಿಸುತ್ತಿದ್ದಾನೋ ಆದಷ್ಟು ಆ ರಸ್ತೆಯ ಎಡಭಾಗಕ್ಕೆ ಸಮೀಪವಾಗಿ ಚಲಿಸಬೇಕು. ಬಲಕ್ಕೆ ತಿರುಗುವಾಗ ತಾನು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾನೋ ಆದಷ್ಟು ಆ ರಸ್ತೆಯ ಮಧ್ಯ ಭಾಗಕ್ಕೆ ಬಂದು ಮತ್ತು ಯಾವ ರಸ್ತೆಗೆ ಪ್ರವೇಶಿಸುತ್ತಿರುವನೋ ಅದರ ಆದಷ್ಟೂ ಎಡ ಭಾಗದ ಹತ್ತಿರ ಬರಬೇಕು.

3. ಬಲಬದಿಯಿಂದ ಮುನ್ನುಗ್ಗುವುದು :-
ನಿಬಂಧನೆ ೫ ರಲ್ಲಿ ತಿಳಿಸಿರುವುದನ್ನು ಹೊರತು ಪಡಿಸಿ, ಮೋಟಾರು ವಾಹನದ ಚಾಲಕನು ತಾನು ಸಾಗುತ್ತಿರುವ ದಿಕ್ಕಿನಲ್ಲಿ ಚಲಿಸುತ್ತಿರುವ ಎಲ್ಲಾ ವಾಹನ ಸಂಚಾರದ ಬಲಭಾಗದಿಂದಲೇ ಮುಂದೆ ಸಾಗಬೇಕು.

4. ಎಡಬದಿಯಿಂದ ಮುನ್ನುಗುವುದು :-
ಮೋಟಾರು ವಾಹನದ ಚಾಲಕನು ಯಾವ ವಾಹನದ ಚಾಲಕನು ಬಲಕ್ಕೆ ತಿರುಗುವ ಉದ್ದೇಶದಿಂದ ರಸ್ತೆಯ ಮಧ್ಯಭಾಗಕ್ಕೆ ಬಂದಿರುತ್ತಾನೋ, ಆ ವಾಹನದ ಎಡಭಾಗಕ್ಕೆ ಬಂದು ಈ ಎರಡರಲ್ಲಿ ಯಾವುದೇ ಬದಿಯಿಂದ ಮುಂದೆ ಸಾಗಬಹುದು.

5.ಕೆಲವೊಂದು ಸಂದರ್ಭಗಳಲ್ಲಿ (ಓವರ್ ಟೇಕಿಂಗ್ ) ಮುನ್ನುಗ್ಗುವುದು ನಿಷೇದಿಸಿದೆ :-
ವಾಹನದ ಚಾಲಕನು ತಾನು ಚಲಿಸುತ್ತಿರುವ ದಿಕ್ಕಿನಲ್ಲಿ ಸಾಗುತ್ತಿರುವ ವಾಹನವನ್ನು ಮೀರಿ ಹಾದು ಹೋಗಬಾರದು.

6.ಕೆಲವೊಂದು ಸಂದರ್ಭಗಳಲ್ಲಿ (ಓವರ್ ಟೇಕಿಂಗ್ ) ಮುನ್ನುಗ್ಗುವುದು ನಿಷೇದಿಸಿದೆ :- ( ಓವರ್ ಟೇಕಿಂಗ್‌ಗೆ ) ಮುನ್ನುಗ್ಗಲು ಆಡಚಣೆ ಒಡ್ಡಬಾರದು :-
ಇನ್ನೊಂದು ವಾಹನವು ತನ್ನನ್ನು ಓವರ್ ಟೇಕ್ ಮಾಡುತ್ತಿರುವಾಗ ಅಥವಾ ಮೀರಿ ಹಾದು ಹೋಗುವಾಗ, ತನ್ನ ವೇಗವನ್ನು ಹೆಚ್ಚಿಸಬಾರದು ಅಥವಾ ಇನ್ನೊಂದು ವಾಹನವು ಮೀರಿ ಹೋಗುವುದಕ್ಕೆ ಯಾವುದೇ ರೀತಿಯಲ್ಲಿ ಅಡಚಣೆ ಮಡಬಾರದು.

7.ರಸ್ತೆ ಕೂಡುವಿಕೆಯಲ್ಲಿ ಮುಂಜಾಗ್ರತೆ :-
ವಾಹನದ ಚಾಲಕನು ರಸ್ತೆಗಳು ಅಡ್ಡ ಹಾಯುವಲ್ಲಿ , ಸಂಚಾರ ನಿಯಂತ್ರಣ ಇಲ್ಲದಿರುವಂತಹ ಜಂಕ್ಷನ್‌ ಗಳಿಗೆ ಸಮೀಪಿಸುವಾಗ ವೇಗವನ್ನು ಕಡಿಮೆ ಮಾಡಬೇಕು. ಆತನು ಪ್ರವೇಶಿಸುತ್ತಿರುವ ರಸ್ತೆಯು ಮುಖ್ಯ ರಸ್ತೆಯಗಿದ್ದು ಹಾಗೆಂದು ಸೂಚಿಸಲ್ಪಟ್ಟಿದ್ದಾಗ ರಸ್ತೆಯಲ್ಲಿ  ಚಲಿಸುತ್ತಿರುವ ವಾಹನಗಳಿಗೆ ದಾರಿ ಬಿಡಬೇಕು ಮತ್ತು ಇತರೆ ಯವುದೇ ಸಂದರ್ಭದಲ್ಲಿ ತನ್ನ ಬಲಭಾಗದ ಆಡ್ಡ ಹಾಯುವ ರಸ್ತೆಗೆ ಸಮೀಪಿಸುತ್ತಿರುವ ಎಲ್ಲಾ ವಾಹನ ಸಂಚಾರಕ್ಕೆ ದಾರಿ ಬಿಡಬೇಕು.

8. ರಸ್ತೆ ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ದಾರಿ ಕೊಡುವುದು :-
ಮೋಟಾರು ವಾಹನದ ಚಾಲಕನು ರಸ್ತೆಗೆ ಪ್ರವೇಶಿಸುವಾಗ, ಸಂಚಾರವನ್ನು ನಿಯಂತ್ರಿಸಲಾಗುವುದಿಲ್ಲ, ಚಾಲಕನು ಪ್ರವೇಶಿಸಿದ ರಸ್ತೆಯ ಒಂದು ಮುಖ್ಯ ರಸ್ತೆಯಾಗಿದ್ದರೆ, ಆ ರಸ್ತೆಯಲ್ಲಿ ಮುಂದುವರಿಯುವ ವಾಹನಗಳಿಗೆ ದಾರಿ ಮಾಡಿಕೊಡಬೇಕು & ಬೇರೆ ಯಾವುದೇ ಸಂಧರ್ಬದಲ್ಲಿ ಅವನು ಬಲಗೈನಲ್ಲಿ ಮುಖ್ಯರಸ್ತೆಗೆ ಬರುವ ಎಲ್ಲಾ ವಾಹನ ದಟ್ಟಣೆಯಾಗದಂತೆ ದಾರಿ ನೀಡಬೇಕು.


9. ಅಗ್ನಿ ಶಾಮಕ ವಾಹನಗಳಿಗೆ ಹಾಗೂ ಚಿಕಿತ್ಸಾ ವಾಹನಗಳಿಗೆ ಮುಕ್ತ ಅವಕಾಶ ಕೊಡಬೇಕು :-
ಅಗ್ನಿ ಶಾಮಕ ವಾಹನ ಅಥವಾ ಚಿಕಿತ್ಸಾ ವಾಹನ ಸಮೀಪ ಬಂದಾಗ ಪ್ರತಿಯೊಬ್ಬ ಮಾರ್ಗದ ಚಾಲಕರು ರಸ್ತೆಯ ಪಕ್ಕಕ್ಕೆ ಸರಿದು ಅಂಥ ವಾಹನಗಳಿಗೆ ಮುಕ್ತ ಮಾರ್ಗದ ಅವಕಾಶ ಕೊಡಬೇಕು.

10.“ ಯು ” ತಿರುವು ತೆಗೆದುಕೊಳ್ಳುವುದು :-
ಯವುದೇ ರಸ್ತೆಯಲ್ಲಿ “ ಯು ” ತಿರುವನ್ನು ವಿಶೇಷವಾಗಿ ನಿಷೇದಿಸಲಾಗಿರುವುದೋ ಮತ್ತು ವಾಹನ ಸಂಚಾರ ದಟ್ಟಣೆ ಇರುವುದೋ ಅಂತಹ ಕಡೆ “ ಯು ” ತಿರುವು ತೆಗೆದು ಕೊಳ್ಳತಕ್ಕದ್ದಲ್ಲ. ಒಂದು ವೇಳೆ “ ಯು ” ತಿರುವಿಗೆ ಅನುಮತಿಯಿದ್ದರೆ ಚಾಲಕನು ಬಲಕ್ಕೆ ತಿರುಗುತ್ತಿರುವ ಹಾಗೆ ಹಸ್ತ ಸಂಕೇತ ತೋರಿಸಿ ಹಿನ್ನೋಟದ ಕನ್ನಡಿಯಲ್ಲಿ ನೋಡಿಕೊಂಡು ಸುರಕ್ಷಿತವೆಂದು ಕಂಡು ಬಂದಾಗ ಹಾಗೆ ತಿರುವು ತೆಗೆದುಕೊಳ್ಳಬಹುದು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಆಟೋ ಚಾಲಕರಿಗೆ ಸಭೆ ನಡೆಸಲಾಯಿತು

ದಿನಾಂಕಃ-20-01-2022 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಆಟೋ ಚಾಲಕರುಗಳ ಸಭೆಯನ್ನು ನಡೆಸಿ, ಸಭೆಯಲ್ಲಿ ಚಾಲಕರಿಗೆ ಸಂಚಾರ ನಿಯಮಗಳ ಕುರಿತಂತೆ ತಿಳುವಳಿಕೆ ನೀಡಿ ಅವರುಗಳ ಕುಂದುಕೊರತೆಯನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶಿವಮೊಗ್ಗ ನಗರದ ಅಧಿಕಾರಿಗಳು ಉಪಸ್ಥಿತರಿದ್ದರು.

Get News on Whatsapp

by send "Subscribe" to 7200024452
Close Bitnami banner
Bitnami