ಹೊಸ ವರ್ಷದ ಮುನ್ನಾದಿನ ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ 318 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

John Prem
0 0
Read Time:1 Minute, 21 Second

ಬೆಂಗಳೂರು: ಹೊಸ ವರ್ಷದ ಮುನ್ನಾದಿನ ರಾತ್ರಿ ಕರ್ಫ್ಯೂ ನಿಯಮ ಉಲ್ಲಂಘಿಸಿದ 318 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ಪೈಕಿ ವಶಪಡಿಸಿಕೊಂಡ 318 ವಾಹನಗಳ ಪೈಕಿ 280 ದ್ವಿಚಕ್ರ ವಾಹನಗಳು, 28 ನಾಲ್ಕು ಚಕ್ರ ವಾಹನಗಳು ಮತ್ತು 10 ತ್ರಿಚಕ್ರ ವಾಹನಗಳು ಸೇರಿವೆ. ರಾತ್ರಿ ಕರ್ಫ್ಯೂ ಗಡುವನ್ನು ಮೀರಿ ವಾಹನ ಸವಾರರು ಯಾವುದೇ ಉದ್ದೇಶವಿಲ್ಲದೆ ತಿರುಗಾಡುತ್ತಿದ್ದರು. ಹೀಗಾಗಿ ಇಂತಹ ವಾಹನಗಳನ್ನು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಮತ್ತು ಕೋವಿಡ್-19 ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹೇರಿತ್ತು. ಹೊಸ ವರ್ಷ ಆಚರಣೆ ದಿನ ಅಂದರೆ ನಿನ್ನೆಯಿಂದಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿತ್ತು. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೂ ನೈಟ್ ಕರ್ಫ್ಯೂ ಇರಲಿದ್ದು, ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ಜನರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

'ಬುಲ್ಲಿ ಬಾಯಿ' ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ

ಸಂಚಲನ ಮೂಡಿಸಿದ್ದ ಬುಲ್ಲಿ ಬಾಯಿ APP ಪ್ರಕರಣದಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 21 ವರ್ಷದ ಶಂಕಿತನನ್ನು ಸೈಬರ್ ಸೆಲ್ ಮುಂಬೈಗೆ ಕರೆತರುತ್ತಿದೆಶಂಕಿತನ ನಿಖರವಾದ ಗುರುತು ಮತ್ತು ಆತನನ್ನು ಎಲ್ಲಿಂದ ಕರೆದುಕೊಂಡು ಹೋಗಲಾಗಿದೆ ಎಂಬುದನ್ನು ದೃಢಪಡಿಸಲಾಗಿಲ್ಲ. ಮಹಾರಾಷ್ಟ್ರದ ಗೃಹ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಸತೇಜ್ ಪಾಟೀಲ್ ಅವರು ಬೆಳವಣಿಗೆಯನ್ನು ದೃಢಪಡಿಸಿದರು, ಆದರೆ ಅವರು ವಿವರಗಳಿಗೆ ಹೋಗಲು ನಿರಾಕರಿಸಿದರು. “ಮುಂಬೈ ಪೊಲೀಸರಿಗೆ ಒಂದು ಪ್ರಗತಿ ಸಿಕ್ಕಿದೆ. […]

Get News on Whatsapp

by send "Subscribe" to 7200024452
Close Bitnami banner
Bitnami