ಬಳ್ಳಾರಿ ಪೊಲೀಸರ ಕಾರ್ಯಾಚರಣೆ: 4 ದರೋಡೆಕೋರರ ಬಂಧನ, 41 ಲಕ್ಷ ರೂ ನಗದು ವಶಕ್ಕೆ

3 0
Read Time:1 Minute, 31 Second

ಬಳ್ಳಾರಿ: ಬಳ್ಳಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4 ದರೋಡೆಕೋರರ ಬಂಧಿಸಿ 41 ಲಕ್ಷ ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ನಗರದ ಬಂಗಾರದ ಅಂಗಡಿಯ 41 ಲಕ್ಷ ರೂ ಹಣವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವಾತನ ಮೇಲೆ ಹಲ್ಲೆ ಮಾಡಿ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದ ನಾಲ್ವರನ್ನು ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರು ಘಟನೆ ನಡೆದ ದಿನವೇ ಹಣ ಸಮೇತ ಬಂಧಿಸಿದ್ದಾರೆ.

ಈ ಬಗ್ಗೆ ಎಸ್ಪಿ ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು. ಚಿನ್ನಾಭರಣದ ಅಂಗಡಿಯ ಕೆಲಸಗಾರ ಮೆಹಬೂಬ್ ಭಾಷ ಎಂಬಾತ ಹಣವನ್ನು‌ ತೆಗೆದುಕೊಂಡು‌ ಬೆಂಗಳೂರಿಗೆ ಹೊರಟಿದ್ದನಂತೆ ಆತ ನಗರದ ಗಡಗಿ ಚೆನ್ನಪ್ಪ ಸರ್ಕಲ್ ಬಳಿಯ ಪಶು ಆಸ್ಪತ್ರೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆತನಿಗೆ ಹಲ್ಲೆ ಮಾಡಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ತಕ್ಷಣ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರು ಕಾರ್ಯಪ್ರವೃತ್ತರಾಗಿ ಹಣ ಕದ್ದ ನಗರದ ಬಂಡಿಮೋಟ್ ನ ಅಸಾದ್ (25), ಗುಗ್ಗರಹಟ್ಟಿಯ ರಸೂಲ್(35), ಕೋಟೆ ಪ್ರದೇಶದ ವೆಂಕಟೇಶ್(34) ಮತ್ತು ಜಾಗೃತಿ ನಗರದ ಧರವೇಶ್ (28) ಅವರನ್ನು ಬಂಧಿಸಿದ್ದು ಕದ್ದ 41 ಲಕ್ಷ ಹಣವನ್ನೂ ವಶಪಡಿಸಿಕೊಳ್ಳಲಾಗಿದೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಪೊಲೀಸರಿಂದ 112ಸಂಖ್ಯೆಗೆ ಕರೆ ಮಾಡುವಂತೆ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ

ಹೊಯ್ಸಳ ವಾಹನದ ಸಿಬ್ಬಂದಿ ಮತ್ತು ಅಧಿಕಾರಿಗಳು ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ಶಿಕ್ಷಕ ಮತ್ತು ಸಿಬ್ಬಂದಿಗಳಿಗೆ 112 ERSS ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ತುರ್ತು ಸಂದರ್ಭಗಳಲ್ಲಿ ಮತ್ತು ಯಾವುದೇ ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಿದರು. 112 Hubballi Dharwad ಇಲ್ಲಿಯವರೆಗೆ ಬಳಕೆಯಲ್ಲಿದ್ದ ಪ್ರತ್ಯೇಕ ತುರ್ತು ದೂರವಾಣಿ ಸಂಖ್ಯೆಗಳಾದ 100, 101 ಮುಂತಾದವುಗಳ ಬದಲಾಗಿ ಇನ್ನು ಮುಂದೆ ಸಾರ್ವಜನಿಕರು 112ಗೆ ಕರೆ […]

Get News on Whatsapp

by send "Subscribe" to 7200024452
Close Bitnami banner
Bitnami