ನಾಪೋಕ್ಲು ಪೊಲೀಸರ ಕಾರ್ಯಾಚರಣೆ. ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ.

John Prem
1 0
Read Time:2 Minute, 9 Second

ಜಿಲ್ಲೆಯ ನಾಪೋಕ್ಲು ನಗರದ ನಂದಿ ಚಿನ್ನದಂಗಡಿಗೆ ಮೂವರು ವ್ಯಕ್ತಿಗಳು ಬಂದು ‌ನಕಲಿ ಚಿನ್ನವನ್ನು ಗಿರವಿ ಇಟ್ಟು ಮುಂಗಡವಾಗಿ 20,000/- ಹಣವನ್ನು ಪಡೆದುಕೊಂಡಿದ್ದು,ಅನುಮಾನಗೊಂಡ ಅಂಗಡಿ ಮಾಲೀಕ ಪರೀಕ್ಷಿಸಿದಾಗ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಸೇರಿಸಿರುವುದು ಕಂಡು ಬಂದಿದ್ದು, ಅದೇ ವೇಳೆಗೆ ಮೂವರು ಆರೋಪಿಗಳು ಅಂಗಡಿಯಿಂದ ಪರಾರಿಯಾಗಿದ್ದು ಈ ಸಂಬಂಧ ಅಂಗಡಿ ಮಾಲೀಕರು ನಾಪೋಕ್ಲು ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಶ್ರೀ. ಅನೂಪ್ ಮಾದಪ್ಪರವರ ನೇತೃತ್ವದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಶ್ರೀ ಆರ್.ಕಿರಣ್ ಹಾಗೂ ಎಎಸ್ಐ ಶ್ರೀ. ಕುಶಾಲಪ್ಪ ಮತ್ತು ಸಿಬ್ಬಂದಿಗಳಾದ ಬಿ.ಕೆ ಮೋಹನ್, ಎಸ್.ಕೆ.ಗಣೇಶ್, ರವಿ, ಸಾಜನ್, ರಾಮಕೃಷ್ಣ, ನವೀನ್, ಹರ್ಷ, ಆಶಿಕ್, ಗಿರೀಶ್ ಮತ್ತು ಚಾಲಕ ಶರೀಫ್ ಒಳಗೊಂಡ ತಂಡವು ಒಬ್ಬ ಸ್ಥಳೀಯ ಮತ್ತು ಇಬ್ಬರು ಪರಸ್ಥಳೀಯ ಆರೋಪಿಗಳನ್ನು ಬಂಧಿಸಿ ಸದರಿಯವರಿಂದ ಕೃತ್ಯಕ್ಕೆ ಬಳಸಿದ ಹೊಂಡಾ ಅಮೇಜಾನ್ ಕಾರು ಮತ್ತು ಅಂದಾಜು ರೂ.1,20,000/– ಬೆಲೆಬಾಳುವ ಚಿನ್ನವನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಯನ್ನು ಪ್ರಶಂಸಿಸಲಾಗಿದೆ.ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ಚಿನ್ನಾಭರಣವನ್ನು ಖರೀದಿಸಬಾರದು ಮತ್ತು ನಕಲಿ ಚಿನ್ನವನ್ನು ಮಾರಾಟ ಮಾಡುವ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವುದು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,


ಜೆ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪೊಲೀಸ್ ಠಾಣೆಗಳ ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಲಾಗಿದ್ದ ನಗದು, ಚಿನ್ನಾಭರಣ, ವಾಹನಗಳು ಹಾಗೂ ಇತರೆ ವಸ್ತುಗಳು ಸೇರಿದಂತೆ ಒಟ್ಟು ರೂ 18,03,520 ಮೌಲ್ಯದ ಸ್ವತ್ತುಗಳನ್ನು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ದಿನಾಂಕ 22.11.2021 ರಂದು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಸೋನವನ ಋಷಿಕೇಶ್ ಭಗವಾನ್ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್ ಗುಣಾರೆ ರವರ ನಿರ್ದೇಶನದಂತೆ ವಾರೀಸುದಾರರಿಗೆ ಹಸ್ತಾಂತರಿಸಲಾಯಿತು.

Get News on Whatsapp

by send "Subscribe" to 7200024452
Close Bitnami banner
Bitnami