ಕಲಬುರಗಿ ನಗರದ ಅಶೋಕನಗರ ಪೊಲೀಸ ಠಾಣೆಯ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಡುಹಗಲೇ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಶೋಕನಗರ ಠಾಣೆಯ ಇನ್ಸಪೇಕ್ಟರ ಪಂಡಿತ ಸಗರ ಮತ್ತು ರೌಡಿ ನಿಗ್ರಹದಳದ ಪಿ.ಎಸ್.ಐ ಬಸವರಾಜ ಮತ್ತು ಸಿ.ಇ.ಎನ್ ಠಾಣೆಯ ಪಿ.ಎಸ್.ಐ ವಾಹಿದ ಕೋತ್ವಾಲ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಜನರನ್ನು ಆಮಿಷವೊಡ್ಡುವ ಮೂಲಕ ಮತ್ತು ಆಕರ್ಷಕ ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಪೋಂಜಿ ಯೋಜನೆ ನಡೆಸುತ್ತಿದ್ದ ಮೂವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ಹೆಚ್ ಎಸ್ ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಎಂದು ಗುರುತಿಸಲಾಗಿದೆ. ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಸಂದೀಪ್ ಪಾಟೀಲ್, “ಆರ್ಥಿಕ ಅಪರಾಧ ವಿಭಾಗವು ಎಚ್ಎಸ್ಆರ್ ಲೇಔಟ್ನಲ್ಲಿ ಮತ್ತೊಂದು ಪೊಂಜಿ ಸ್ಕೀಮ್/ಚೈನ್-ಲಿಂಕ್ ಯೋಜನೆಯನ್ನು […]