ಸಿಸಿಬಿ ಮೈಸೂರು ಪೊಲೀಸರಿಂದ ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ ಒಟ್ಟು 4,00,000/-ರೂ ಮೌಲ್ಯದ 06 ದ್ವಿಚಕ್ರ ವಾಹನಗಳ ವಶ

John Prem 9448190523
3 0
Read Time:1 Minute, 54 Second

ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆ ಸಂಬಂಧ ನಗರ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನೂ ರಚಿಸಿತ್ತು ಈ ತಂಡವು ದಿನಾಂಕ 06-08-2021ರಂದು ಖಚಿತ ವರ್ತಮಾನದ ಮೇರೆಗೆ ಮೈಸೂರು ನಗರದ ರಾಜೀವ್ ನಗರ ಅಲ್ ಬದರ್ ಮಸೀದಿ ಬಳಿ ಮೊದಲನೆಯ ಆರೋಪಿ ವಶಕ್ಕೆ ಪಡೆದು ದಿನಾಂಕ06-08-2021 ರಂದು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗಿ ಎರಡನೇ ಆರೋಪಿಯ ಮೇರೆಗೆ ಒಂದನೇ ಆರೋಪಿಯು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಯಿಂದ ರೂ4,00,000/- ಗಳ ಮೌಲ್ಯದ 6ರಿಂದ ದ್ವಿಚಕ್ರ ವಾಹನಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ .ಒಂದನೇ ಆರೋಪಿ ಕಳ್ಳತನ ಮಾಡಿ ತರುತ್ತಿದ್ದ ದ್ವಿಚಕ್ರವಾಹನಗಳನ್ನು ಎರಡನೇ ಆರೋಪಿ ವಿಲೇವಾರಿ ಮಾಡುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ .

ಈ ಕಾರ್ಯಾಚರಣೆಯನ್ನು ಮೈಸೂರು ನಗರ ಡಿ.ಸಿ.ಪಿ. ಶ್ರೀಮತಿ .ಗೀತಾ ಪ್ರಸನ್ನ ರವರು ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ ಶ್ರೀ ಸಿ. ಕೆ. ಅಶ್ವತ್ಥ ನಾರಾಯಣ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆರ್. ಜಗದೀಶ್ ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ .
ಈ ಪತ್ತೆ ಕಾರ್ಯ ವನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ॥ ಚಂದ್ರಗುಪ್ತಾ ಐ.ಪಿ.ಎಸ್ .ರವರು ಪ್ರಸಂಶಿಸಿರುತ್ತಾರೆ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
33 %
Sad
Sad
0 %
Excited
Excited
67 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಎಂ.ಎಂ.ಡಿ.ಆರ್ ಕಾಯ್ದೆ ಕುರಿತಾದ ಉಪನ್ಯಾಸ ಕಾರ್ಯಕ್ರಮ-ಮೈಸೂರು ಜಿಲ್ಲಾ ಪೊಲೀಸ್

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಅಭಿಯೋಜನಾ ಇಲಾಖೆ ವತಿಯಿಂದ ಎಂ.ಎಂ.ಡಿ.ಆರ್ ಕಾಯ್ದೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು . ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ.M.L.ರಘುನಾಥ್ ರವರು ಕಾರ್ಯಕ್ರಮ ಉದ್ಘಾಟಿಸಿದರು. 2ನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಶ್ರೀ.ಹೊಸಮನಿ ಪುಂಡಲೀಕ ರವರು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು DLSA ಸದಸ್ಯ ಕಾರ್ಯದರ್ಶಿಗಳಾದ ಶ್ರೀ.ದೇವರಾಜ […]

Get News on Whatsapp

by send "Subscribe" to 7200024452
Close Bitnami banner
Bitnami